Construction
1) Drawing a perpendicular bisector to a given line (ಒಂದು ರೇಖೆಗೆ ಲಂಬಾರ್ಧಕವನ್ನು ರಚಿಸುವುದು)
ಲಂಬಾರ್ಧಕವು ರೇಖೆಗೆ ಲಂಬವಾಗಿರುವುದರ ಜೊತೆಗೆ ಅದನ್ನು ಎರಡು ಸಮಭಾಗಗಳನ್ನಾಗಿ ಮಾಡುತ್ತದೆ. ಈ ರಚನೆಗೆ ನಿಮಗೆ ಬೇಕಾಗಿರುವುದು ಒಂದು ಸ್ಕೇಲ್, ಪೆನ್ಸಿಲ್ ಮತ್ತು ಕೈವಾರ. ತಾಳೆ ನೋಡಲು ಕೋನಮಾಪಕವನ್ನು ಬಳಸಿ.
ರಚನೆಯ ಹಂತಗಳು ಹೀಗಿವೆ.
- ಒಂದು ರೇಖಾಖಂಡವನ್ನು ಅಂದರೆ ನೇರ ಗೆರೆಯನ್ನು ಎಳೆಯಿರಿ.ಉದಾಹರಣೆಗೆ ; AB
- ಕೈವಾರದಲ್ಲಿ ತ್ರಿಜ್ಯ AB ಯ ಉದ್ದದ ಅರ್ಧಕ್ಕಿಂತ ಹೆಚ್ಚಾಗಿರುವಂತೆ ಅಂದರೆ ಸುಮಾರು ಮುಕ್ಕಾಲು ಇರುವಂತೆ ಇಟ್ಟುಕೊಳ್ಳಿ.
- ಕೈವಾರವನ್ನು A ಯಲ್ಲಿಟ್ಟು ರೇಖೆಯ ಮೇಲೆ ಮತ್ತು ಕೆಳಗೆ ಕಂಸಗಳನ್ನು ಎಳೆಯಿರಿ. ಈಗ ಕೈವಾರವನ್ನು B ಯಲ್ಲಿಟ್ಟು ರೇಖೆಯ ಮೇಲೆ ಮತ್ತು ಕೆಳಗೆ ಕಂಸಗಳನ್ನು ಎಳೆಯಿರಿ. ಈ ಕಂಸಗಳು A ಯಿಂದ ಎಳೆದ ಕಂಸಗಳನ್ನು ಕತ್ತರಿಸಬೇಕು ಮತ್ತು ಅಷ್ಟೇ ತ್ರಿಜ್ಯ ಹೊಂದಿರಬೇಕು.
- ಕಂಸಗಳು ಪರಸ್ಪರ ಕತ್ತರಿಸಿರುವ ಬಿಂದುಗಳಿಗೆ C ಮತ್ತು D ಎಂದು ಹೆಸರಿಸಿ.
- C ಮತ್ತು D ಗಳನ್ನು ಸೇರಿಸುವಂತೆ ಸ್ಕೇಲ್‌ನ ಸಹಾಯದಿಂದ ಒಂದು ಸರಳ ರೇಖೆಯನ್ನು ಎಳೆಯಿರಿ.
- CD ರೇಖೆಯು AB ಗೆ ಎಳೆದ ಲಂಬಾರ್ಧಕವಾಗಿದೆ.
- ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೀಡಿಯೋವನ್ನು ನೋಡಿ
2. Tangents part-1
ವೃತ್ತಕ್ಕೆ ಅದರ ಪರಿಧಿಯ ಮೇಲಿನ ಒಂದು ಬಿಂದುವಿನಲ್ಲಿ ಸ್ಪರ್ಶಕವನ್ನು ರಚಿಸುವುದು.
ಸ್ಪರ್ಶಕಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ click here
Comments
Post a Comment