Basic Mathematics



 1) 5 ರಿಂದ ಕೊನೆಗೊಳ್ಳುವ ಸಂಖ್ಯೆಯ ವರ್ಗವನ್ನು ಕಂಡುಹಿಡಿಯುವುದು :
      Finding squares of the numbers ending with 5

    
   ಹಂತ 1: ದತ್ತ ಸಂಖ್ಯೆಯ ಬಿಡಿ ಸ್ಥಾನವನ್ನು ಪ್ರತ್ಯೇಕಿಸಿ
   ಹಂತ 2:  ಬಿಡಿ ಸ್ಥಾನದಲ್ಲಿ 5 ಇದ್ದು ಇದನ್ನು 5 ರಿಂದಲೇ ಗುಣಿಸಿ ಉತ್ತರವನ್ನು ಕೆಳಗೆ ಬರೆಯಿರಿ
   ಹಂತ 3: ಎಡಭಾಗದ ಸಂಖ್ಯೆಯನ್ನು ಅದರ ಮುಂದಿನ ಸಂಖ್ಯೆಯಿಂದ ಗುಣಿಸಿ ಉತ್ತರವನ್ನು ಕೆಳಗೆ ಬರೆಯಿರಿ.
   ಹಂತ 4: ಈಗ ಎರಡೂ ಉತ್ತರಗಳನ್ನು ಸೇರಿಸಿ ಜೊತೆಯಾಗಿ ಬರೆಯಿರಿ.
   ಉದಾಹರಣೆ : 35 ರ ವರ್ಗ ಕಂಡುಹಿಡಿಯಲು ಬಿಡಿ ಸ್ಥಾನದ ಸಂಖ್ಯೆ, ಅಂದರೆ 5 ನ್ನು 5 ರಿಂದ ಗುಣಿಸಿ 25 ಎಂದು ಕೆಳಗೆ ಬರೆದುಕೊಳ್ಳಿ. ಉಳಿದ ಸಂಖ್ಯೆ 3 ನ್ನು                           ಅದರ ಮುಂದಿನ ಸಂಖ್ಯೆ 4 ರಿಂದ ಗುಣಿಸಿ 12 ಎಂದು ಬರೆಯಿರಿ. ಈಗ ಎರಡನ್ನು ಸೇರಿಸಿ 1225 ಎಂದು ಬರೆದರೆ ಅದೇ 35 ರ                                             ವರ್ಗವಾಗಿರುತ್ತದೆ.  
                     ಹೆಚ್ಚಿನ ವಿವರಣೆಗೆ ಮೇಲಿನ  ವೀಡಿಯೋವನ್ನು ನೋಡಿ.


 2) 25 ರಿಂದ ಕೊನೆಗೊಳ್ಳುವ ಸಂಖ್ಯೆಯ ವರ್ಗಮೂಲವನ್ನು ಕಂಡುಡಿಯುವುದು :
         Finding square root of the numbers ending with 25

         ಉದಾಹರಣೆಗೆ 15625ರ ವರ್ಗಮೂಲವನ್ನು ಕಂಡು ಹಿಡಿಯಲು ಈ ಹಂತಗಳನ್ನು ಅನುಸರಿಸಿ
  • ಬಿಡಿ ಸ್ಥಾನದಿಂದ ಆರಂಭಿಸಿ ಎರಡು ಅಂಕಿಗಳ ಗುಂಪುಗಳನ್ನು ಮಾಡಿ - 15625
  • ಮೂರು ಗುಂಪುಗಳು ಬರುವುದರಿಂದ ಇದರ ವರ್ಗಮೂಲದಲ್ಲಿ ಮೂರು ಅಂಕಿಗಳಿರುತ್ತವೆ.
  • ಸಂಖ್ಯೆಯನ್ನು ಎರಡು ಗುಂಪುಗಳಾಗಿ ವರ್ಗೀಕರಿಸಿ. 25 ಒಂದು ಗುಂಪು ಮತ್ತು 156 ಮತ್ತೊಂದು ಗುಂಪು
  • 25 ರ ವರ್ಗಮೂಲ 5 ಆಗಿರುವುದರಿಂದ  ವರ್ಗಮೂಲದ ಬಿಡಿಸ್ಥಾನದ ಅಂಕೆ 5 ಆಗಿರುತ್ತದೆ.
  • ಈಗ  ಇನ್ನೆರಡು ಅಂಕಿಗಳನ್ನು ಪಡೆಯಲು ಮತ್ತೊಂದು ಗುಂಪು 156 ನ್ನು ಎರಡು ಅನುಕ್ರಮ ಅಂಕಿಗಳ ಗುಣಲಬ್ಧವಾಗಿ ಬರೆಯಿರಿ. 
  • 156 ರಲ್ಲಿ ಕೊನೆ ಅಂಕಿ 6 ಆಗಿರುವುದರಿಂದ ಗುಣಿಸಿದಾಗ 6ನ್ನು ಕೊಡುವ ಎರಡು ಅನುಕ್ರಮ ಅಂಕಿಗಳು ಎಂದರೆ ಅವು 2 ಮತ್ತು 3.
  • ಉತ್ತರಕ್ಕೆ ನಮಗೆ ಎರಡು ಅಂಕಿಯ ಸಂಖ್ಯೆ ಬೇಕಿರುವುದರಿಂದ ಬಿಡಿಸ್ಥಾನದಲ್ಲಿ 2 ಮತ್ತು 3ನ್ನು ಹೊಂದಿರುವ ಅನಕ್ರಮ ಅಂಕಿಗಳನ್ನು ಯೋಚಿಸಿ. ಇವು 12&13,  22&23, 32&33..... ಆಗಿರಬಹುದು.
  • ಆದರೆ ಮೇಲಿನ ಅನುಕ್ರಮ ಸಂಖ್ಯೆಗಳಲ್ಲಿ ಗುಣಿಸಿದಾಗ 156 ನ್ನು ಕೊಡುವ ಜೋಡಿ ಎಂದರೆ 12 ಮತ್ತು 13.
  • 12 & 13 ರಲ್ಲಿ ಚಿಕ್ಕ ಸಂಖ್ಯೆ 12
  • ಆದ್ದರಿಂದ 15625 ರ ವರ್ಗಮೂಲ 125
            ಹೆಚ್ಚಿನ ವಿವರಣೆಗೆ ಈ ವೀಡಿಯೋವನ್ನು ನೋಡಿ.






Comments

Post a Comment

Popular posts from this blog

perpendicular

tangents part-1

About the page Basic mathematics- square and squre roots