Teacher assets


3. 10ನೇ ತರಗತಿ ಭೌತಶಾಸ್ತ್ರ - ವಿದ್ಯುತ್ಪ್ರವಾಹದ ಕಾಂತೀಯ ಪರಿಣಾಮಗಳು

(ಕೃಪೆ : pictures are from ktbs)

1. ಅಯಸ್ಕಾಂತದ ಗುಣಗಳನ್ನು ಪಟ್ಟಿ ಮಾಡಿ.
ಉತ್ತರ :  1) ಸ್ವತಂತ್ರವಾಗಿ ತೂಗುಬಿಟ್ಟ ಅಯಸ್ಕಾಂತವು ಉತ್ತರ ದಕ್ಷಿಣವಾಗಿಯೇ ವಿಶ್ರಾಂತ ಸ್ಥಿತಿಗೆ ಬರುತ್ತದೆ.
              2) ಪ್ರತಿಯೊಂದು ಕಾಂತಕ್ಕೂ ಉತ್ತರ ಮತ್ತು ದಕ್ಷಿಣ ಎಂಬ ಎರಡು ಧ್ರುವಗಳಿರುತ್ತವೆ.
              3) ಕಾಂತದ ಧ್ರುವಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ.
                          
2) ಕಾಂತಕ್ಷೇತ್ರ ಎಂದರೇನು?
ಉತ್ತರ : ಕಾಂತದ ಸುತ್ತಲೂ ಕಾಂತೀಯ ಬಲದ ಪ್ರಭಾವವಿರುವ ಪ್ರದೇಶವನ್ನು ಕಾಂತಕ್ಷೇತ್ರ ಎನ್ನುವರು.

3) ಕಾಂತೀಯ ಬಲರೇಖೆಗಳ ಗುಣಲಕ್ಷಣಗಳನ್ನು ಬರೆಯಿರಿ.
ಉತ್ತರ : 1)ಕಾಂತೀಯ ಬಲರೇಖೆಗಳು ಆವೃತ ಜಾಲಗಳಾಗಿವೆ.
             2) ಕಾಂತೀಯ ಬಲರೇಖೆಗಳು ಉತ್ತರ ಧ್ರುವದಿಂದ ಹೊರಟು ದಕ್ಷಿಣ ಧ್ರುವದಲ್ಲಿ ವಿಲೀನವಾಗುತ್ತವೆ.
             3) ಕಾಂತದ ಒಳಭಾಗದಲ್ಲಿ ಕಾಂತೀಯ ಬಲರೇಖೆಗಳು ದಕ್ಷಿಣ ಧ್ರುವದಿಂದ ಉತ್ತರ ಧ್ರುವದ ಕಡೆಗೆ ಇರುತ್ತವೆ.
             4) ಧ್ರುವಗಳಲ್ಲಿ ಕಾಂತೀಯ ಬಲರೇಖೆಗಳು ದಟ್ಟವಾಗಿರುತ್ತವೆ.
             5) ಯಾವುದೇ ಎರಡು ಕಾಂತೀಯ ಬಲರೇಖೆಗಳು ಒಂದನ್ನೊಂದು ಛೇದಿಸುವುದಿಲ್ಲ.
             
 4)  ದಂಡಕಾಂತದ ಸುತ್ತಲೂ ಕಾಂತೀಯ ಬಲರೇಖೆಗಳನ್ನು ತೋರಿಸುವ ಚಿತ್ರ ಬರೆಯಿರಿ.
         

5) ವಿದ್ಯುತ್ ಪ್ರವಾಹವಿರುವ ನೇರವಾದ ವಾಹಕ ತಂತಿಯ ಸುತ್ತಲಿನ ಕಾಂತೀಯ ಬಲರೇಖೆಗಳ ಗುಣಗಳನ್ನು ಬರೆಯಿರಿ.
ಉತ್ತರ :  1) ಕಾಂತೀಯ ಬಲರೇಖೆಗಳು ಏಕಕೇಂದ್ರೀಯ ವೃತ್ತಗಳ ಆಕಾರದಲ್ಲಿರುತ್ತದೆ.
             2) ತಂತಿಯಿಂದ ದೂರ ಸರಿದಂತೆಲ್ಲಾ ಏಕಕೇಂದ್ರೀಯ ವೃತ್ತಗಳು ದೊಡ್ಡದಾಗುತ್ತಾ ಹೋಗುತ್ತವೆ. 
             3) ತಂತಿಯಿಂದ ದೂರ ಸರಿದಂತೆಲ್ಲಾ ಕಾಂತಕ್ಷೇತ್ರವು ಕ್ಷೀಣಿಸುತ್ತಾ ಹೋಗುತ್ತದೆ. 
             4)  ಕಾಂತಕ್ಷೇತ್ರವು ವಿದ್ಯುತ್ ಪ್ರವಾಹಕ್ಕೆ ನೇರ ಅನುಪಾತದಲ್ಲಿರುತ್ತದೆ.
 
6) ಬಲಗೈ ಹೆಬ್ಬೆರಳ ನಿಯಮವನ್ನು ತಿಳಿಸಿ.
ಉತ್ತರ : ಬಲಗೈ ಹೆಬ್ಬೆರಳ ನಿಯಮದ ಪ್ರಕಾರ, ಹೆಬ್ಬೆರಳು ವಿದ್ಯುತ್‌ ಪ್ರವಾಹದ ದಿಕ್ಕನ್ನು ತೋರಿಸುವಂತೆ, ವಿದ್ಯುತ್‌ ಪ್ರವಾಹವಿರುವ ಒಂದು ನೇರವಾದ ವಾಹಕವನ್ನು ಬಲಗೈನಿಂದ ಹಿಡಿದಾಗ, ಉಳಿದ ಬೆರಳುಗಳು ಕಾಂತಕ್ಷೇತ್ರದ ದಿಕ್ಕನ್ನು ಸೂಚಿಸುತ್ತವೆ.

7)  ವೃತ್ತಾಕಾರದ ವಾಹಕ ಸುರುಳಿಯಲ್ಲಿನ ವಿದ್ಯುತ್ ಪ್ರವಾಹದಿಂದ ಉಂಟಾದ ಕಾಂತಕ್ಷೇತ್ರದ ಗುಣಗಳನ್ನು ಬರೆಯಿರಿ.
ಉತ್ತರ : 1) ಸುರುಳಿ ವಾಹಕದಲ್ಲಿನ ಪ್ರತಿ ಬಿಂದುವಿನಲ್ಲಿ ಅದರ ಸುತ್ತಲೂ ಕಾಂತೀಯ ಬಲರೇಖೆಗಳು ಏಕಕೇಂದ್ರೀಯ ವೃತ್ತಗಳ                   ಆಕಾರದಲ್ಲಿರುತ್ತದೆ.
             2) ತಂತಿಯಿಂದ ದೂರ ಸರಿದಂತೆಲ್ಲಾ ವೃತ್ತಗಳು ದೊಡ್ಡದಾಗುತ್ತಾ ಹೋಗುತ್ತವೆ.
             3) ಸುರುಳಿಯ ಕೇಂದ್ರದಲ್ಲಿ ಕಾಂತೀಯ ಬಲರೇಖೆಗಳು ಸರಳರೇಖೆಯಲ್ಲಿರುವಂತೆ ಗೋಚರಿಸುತ್ತವೆ.
             4) ಕಾಂತಕ್ಷೇತ್ರವು ವಿದ್ಯುತ್ ಪ್ರವಾಹಕ್ಕೆ ನೇರ ಅನುಪಾತದಲ್ಲಿರುತ್ತದೆ.
             5) ಕಾಂತ ಕ್ಷೇತ್ರವು ಸುರುಳಿಯಲ್ಲಿನ ಸುತ್ತುಗಳ ಸಂಖ್ಯೆಗೆ ನೇರ ಅನುಪಾತದಲ್ಲಿರುತ್ತದೆ.

8) ವೃತ್ತಾಕಾರದ ವಾಹಕ ಸುರುಳಿಯಲ್ಲಿನ ವಿದ್ಯುತ್ ಪ್ರವಾಹದಿಂದ ಉಂಟಾದ ಕಾಂತಕ್ಷೇತ್ರವು ಯಾವ ಅಂಶಗಳನ್ನು          
    ಅವಲಂಬಿಸಿದೆ?
ಉತ್ತರ :   ವೃತ್ತಾಕಾರದ ವಾಹಕ ಸುರುಳಿಯಲ್ಲಿನ ವಿದ್ಯುತ್ ಪ್ರವಾಹದಿಂದ ಉಂಟಾದ ಕಾಂತಕ್ಷೇತ್ರವು ಈ ಕೆಳಗಿನ ಅಂಶಗಳನ್ನು ಅವಲಂಬಿಸಿದೆ
             1) ವಾಹಕದಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹ
             2) ಸುರುಳಿಯಲ್ಲಿನ ಸುತ್ತುಗಳ ಸಂಖ್ಯೆ.

9)  ಸೊಲೆನಾಯ್ಡ್‌ ಎಂದರೇನು?
ಉತ್ತರ : ಅವಾಹಕ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುರುಳಿಗಳನ್ನು ಒತ್ತೊತ್ತಾಗಿ ಸುತ್ತಿರುವ ಸಿಲಿಂಡರ್‌    
             ಆಕಾರವನ್ನು ಸೊಲೆನಾಯ್ಡ್‌ ಎನ್ನುವರು. 

10) ವಿದ್ಯುತ್‌ ಪ್ರವಾಹದಿಂದ ಸೊಲೆನಾಯ್ಡ್‌ ನಲ್ಲಿ ಉಂಟಾದ ಕಾಂತಕ್ಷೇತ್ರದ (ಅಥವಾ ಕಾಂತೀಯ ಬಲರೇಖೆಗಳ)  ಗುಣಗಳನ್ನು         ಬರೆಯಿರಿ.
       ಉತ್ತರ : 
           1) ಸೊಲೆನಾಯ್ಡ್‌ನಲ್ಲಿನ ಕಾಂತೀಯ ಬಲರೇಖೆಗಳ ಮಾದರಿಯು ದಂಡಕಾಂತದಂತೆಯೇ ಇರುತ್ತದೆ.
           2) ಸೊಲೆನಾಯ್ಡ್‌ ನ ಒಂದು ತುದಿಯು ಕಾಂತದ ಉತ್ತರ ಧ್ರುವದಂತೆ ವರ್ತಿಸಿದರೆ ಮತ್ತೊಂದು ತುದಿಯು ದಕ್ಷಿಣ 
               ಧ್ರುವದಂತೆ ವರ್ತಿಸುತ್ತದೆ. 
           3) ಸೊಲೆನಾಯ್ಡ್‌ನ ಒಳಭಾಗದಲ್ಲಿ ಕಾಂತೀಯ ಬಲರೇಖೆಗಳು ಸಮಾಂತರ ಸರಳ ರೇಖೆಗಳಂತಿರುತ್ತವೆ.
           4) ಸೊಲೆನಾಯ್ಡ್‌ನ ಒಳಭಾಗದ ಪ್ರತಿ ಬಿಂದುವಿನಲ್ಲಿಯೂ ಕಾಂತಕ್ಷೇತ್ರವು ಏಕರೂಪವಾಗಿರುತ್ತದೆ.

11)  ವಿದ್ಯುತ್‌ ಮೋಟಾರ್‌ ಯಾವ ತತ್ತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ?
ಉತ್ತರ : ವಿದ್ಯುತ್‌ ಪ್ರವಾಹವಿರುವ ಒಂದು ವಾಹಕವನ್ನು ಕಾಂತಕ್ಷೇತ್ರದಲ್ಲಿ ಇರಿಸಿದಾಗ ಅದು ಯಾಂತ್ರಿಕ ಬಲವನ್ನು 
             ಅನುಭವಿಸುತ್ತದೆ ಎಂಬ ತತ್ತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ.

12) ವಿದ್ಯುತ್‌ ಪ್ರವಹಿಸುತ್ತಿರುವ ವಾಹಕವನ್ನು ಕಾಂತಕ್ಷೇತ್ರದಲ್ಲಿರಿಸಿದಾಗ ಅದು ಯಾವಾಗ ಅಧಿಕ ಬಲವನ್ನು ಅನುಭವಿಸುತ್ತದೆ?
ಉತ್ತರ : ವಿದ್ಯುತ್‌ ಪ್ರವಾಹದ ದಿಕ್ಕು ಕಾಂತಕ್ಷೇತ್ರದ ದಿಕ್ಕಿಗೆ ಲಂಬವಾಗಿದ್ದಾಗ ವಾಹಕವು ಗರಿಷ್ಟ ಪ್ರಮಾಣದ ಬಲವನ್ನು                           ಅನುಭವಿಸುತ್ತದೆ.

13) ಮೋಟಾರ್‌ ನಿಯಮ ಅಥವಾ ಫ್ಲೆಮಿಂಗ್‌ನ ಎಡಗೈ ನಿಯಮವನ್ನು ಬರೆಯಿರಿ.
ಉತ್ತರ : ಫ್ಲೆಮಿಂಗ್‌ನ ಎಡಗೈ ನಿಯಮದ ಪ್ರಕಾರ, ಎಡಗೈನ ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯದ ಬೆರಳುಗಳನ್ನು    
            ಪರಸ್ಪರ ಲಂಬವಾಗಿರುವಂತೆ ಹಿಡಿದಾಗ, ತೋರುಬೆರಳು ಕಾಂತಕ್ಷೇತ್ರದ ದಿಕ್ಕನ್ನೂ, ಮಧ್ಯದ ಬೆರಳು ವಿದ್ಯುತ್       
            ಪ್ರವಾಹದ ದಿಕ್ಕನ್ನೂ ಹಾಗೂ ಹೆಬ್ಬೆರಳು ವಾಹಕದ ಚಲನೆಯ ದಿಕ್ಕನ್ನೂ ಸೂಚಿಸುತ್ತದೆ.  

14) ವಿದ್ಯುತ್‌ ಮೋಟಾರ್‌ ಎಂದರೇನು?
ಉತ್ತರ : ವಿದ್ಯುತ್‌ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನವೇ ವಿದ್ಯುತ್‌ ಮೋಟಾರ್.

15) ವಿದ್ಯುತ್‌ ಮೋಟಾರ್‌ನ್ನು ಬಳಸುವ ಸಾಧನಗಳನ್ನು ಹೆಸರಿಸಿ.
ಉತ್ತರ :  ವಿದ್ಯುತ್‌ ಫ್ಯಾನ್‌, ರೆಫ್ರಿಜರೇಟರ್‌, ಮಿಕ್ಸರ್‌, ಬಟ್ಟೆ ತೊಳೆಯುವ ಯಂತ್ರ, ಕಂಪ್ಯೂಟರ್, MP3 ನುಡಿಸುವ    
             ಸಾಧನಗಳಲ್ಲಿ ಬಳಸಲಾಗುತ್ತದೆ. 

16) ಆರ್ಮೇಚರ್ ಎಂದರೇನು?
ಉತ್ತರ : ಅವಾಹಕ ಹೊದಿಕೆನ್ನು ಹೊಂದಿರುವ ತಾಮ್ರದ ತಂತಿಯ ಆಯತಾಕಾರದ  ಸುರುಳಿಗೆ ಆರ್ಮೇಚರ್‌ ಎನ್ನುವರು.

17) ದಿಕ್ಪರಿವರ್ತಕ ಎಂದರೇನು?
ಉತ್ತರ : ಮಂಡಲದಲ್ಲಿ ವಿದ್ಯುತ್‌ ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುವ ಸಾಧನವನ್ನು ದಿಕ್ಪರಿವರ್ತಕ ಎನ್ನುವರು.

Comments

Post a Comment

Popular posts from this blog

perpendicular

tangents part-1

About the page Basic mathematics- square and squre roots